ಮಲ್ಯಗೆ ಜಾಮೀನು

ಭಾರತೀಯ ಉದ್ಯಮಿ ವಿಜಯ್‌ ಮಲ್ಯರನ್ನು ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸರು ಲಂಡನ್‌ನಲ್ಲಿ ಬಂಧಿಸಿದ್ದಾರೆ. ಅವರನ್ನು ಗಡಿಪಾರು ವಾರೆಂಟ್‌ ಅನ್ವಯ ಬಂಧಿಸಲಾಗಿದೆ ಎಂದು ಮೆಟ್ರೋಪಾಲಿಟನ್ ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಬಂಧನದ ಬಳಿಕ ಮಲ್ಯರನ್ನು ವೆಸ್ಟ್‌ ಮಿನಿಸ್ಟರ್‌ನ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಲಾಯಿತು. ಅಲ್ಲಿ ಜಾಮೀನು ಪ್ರಕ್ರಿಯೆ ಮುಗಿದು ಮಲ್ಯರಿಗೆ ಜಾಮೀನು ನೀಡಲಾಗಿದೆ.