ನಮಗೆ ಕೆಂಪು ದೀಪ ಬೇಕಾಗಿಲ್ಲ: ಮೋದಿ

ಈಗಿನ ನವ ಭಾರತದಲ್ಲಿ ಪ್ರತಿ ಭಾರತೀಯನೂ ವಿಶೇಷ ವ್ಯಕ್ತಿತ್ವ ಹೊಂದಿದ್ದಾನೆ ಮತ್ತು ಗಣ್ಯನೆಂದೇ ಪರಿಗಣಿತನಾಗಿದ್ದಾನೆ. ಹೀಗಾಗಿ ವಾಹನಗಳಲ್ಲಿ ಕೆಂಪು ದೀಪಗಳ ಅಗತ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ತಮ್ಮ ನೇತೃತ್ವದ ಸರ್ಕಾರ ಕೆಂಪು ದೀಪಗಳ ಮೇಲಿನ ನಿಷೇಧ ಜಾರಿಗೆ ತಂದಿದ್ದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ ಅವರು, ಈ ಕಾನೂನು ಎಂದೋ ಜಾರಿಯಾಗಬೇಕಿತ್ತು. ಈಗಲಾದರೂ ಜಾರಿ ಆಯಿತಲ್ಲಾ ಎಂಬುದು ಸಮಾಧಾನ ತಂದಿದೆ ಎಂದಿದ್ದಾರೆ.