ಮಲ್ಯ ವಶಕ್ಕೆ ತೆಗೆದುಕೊಳ್ಳಲು ತನಿಖಾ ಏಜೆನ್ಸಿಗಳಿಂದ ಸರ್ವ ಪ್ರಯತ್ನ: ಜೇಟ್ಲಿ

ಶುಕ್ರವಾರ ಲಂಡನ್ ನಲ್ಲಿ ಬಂಧನಕ್ಕೀಡಾಗಿ, ನಂತರ ಜಾಮೀನಿನ ಮೂಲಕ ಬಿಡುಗಡೆಗೊಂಡ ಉದ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಕರೆ ತರುವ ವಿಷಯವಾಗಿ ತನಿಖಾ ಸಂಸ್ಥೆಗಳು ಸಾಕಷ್ಟು ಪ್ರಯತ್ನ ಪಡುತ್ತಿವೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಮಲ್ಯರನ್ನು ಭಾರತಕ್ಕೆ ಕರೆ ತರುವುದು ಬ್ರಿಟನ್ ನಲ್ಲಿ ನ್ಯಾಯಾಂಗ ಪ್ರಕ್ರಿಯೆಯ ಒಂದು ಭಾಗ. ಅಲ್ಲದೆ ಈ ಪ್ರಕ್ರಿಯೆಯ ಸಾಕಷ್ಟು ವಿಷಯಗಳನ್ನು ಪರಿಗಣೆನೆಗೆ ತೆಗೆದುಕೊಳ್ಳಲಾಗುತ್ತದೆ ಎಂದವರು ತಿಳಿಸಿದರು.

ಹಣಕಾಸು ವಂಚನೆ ಪ್ರಕರಣದಲ್ಲಿ ದೇಶದ ಹಲವು ನ್ಯಾಯಾಲಯಗಳಲ್ಲಿ ಆರೋಪ ಎದುರಿಸುತ್ತಿರುವ ಮಲ್ಯರನ್ನು ಮಂಗಳವಾರ ಸ್ಕಾಟ್ಲಂಡ್ ಯಾರ್ಡ್ ಪೊಲೀಸರು ಬಂಧಿಸಿದ್ದರು. ಆದರೆ ಜಾಮೀನಿನ ಮೇಲೆ ಬಂಧಮುಕ್ತಗೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದರು. ಭಾರತದ ದೂರಿನನ್ವಯ ನಡೆಯುತ್ತಿರುವ ವಿಚಾರಣೆಗೆ ಮೇ 17ರಂದು ವೆಸ್ಟ್ ಮಿನಿಸ್ಟರ್  ಕೋರ್ಟ್ನಲ್ಲಿ ಅವರು ಹಾಜರಾಗಬೇಕಿದೆ.