2 ದಿನಗಳ ನಾಗರಿಕ ಸೇವಾ ದಿನಾಚರಣೆಗೆ ಗೃಹ ಸಚಿವರಿಂದ ಚಾಲನೆ

ಎರಡು ದಿನಗಳ ನಾಗರಿಕ ಸೇವಾ ಕಾರ್ಯಕ್ರಮಗಳಿಗೆ ಗೃಹ ಸಚಿವ ರಾಜನಾಥ್ ಸಿಂಗ್ ಅವರು ನವದೆಹಲಿಯಲ್ಲಿ ಚಾಲನೆ ನೀಡಲಿದ್ದಾರೆ.

ಉದ್ಘಾಟನೆ ಬಳಿಕ “ಕ್ರಿಯೇಟಿಂಗ್ ವ್ಯಾಲ್ಯೂ ಥ್ರೂ ಹ್ಯುಮನ್ ಕ್ಯಾಪಿಟಲ್ ಮ್ಯಾನೇಜ್ ಮೆಂಟ್’ ವಿಷಯದ ಮೇಲೆ ಸಂವಾದ ನಡೆಯಲಿದ್ದು, ಕೇಂದ್ರ ಸಿಬ್ಬಂದಿ ಇಲಾಖೆ ಸಚಿವ ಡಾ. ಜಿತೇಂದ್ರ ಸಿಂಗ್ ಅವರೂ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

ಕೃಷಿ, ಇಂಧನ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಗಳ ಕುರಿತ ವಿಷಯಗಳ ಬಗ್ಗೆಯೂ ಸಂವಾದವೂ ನಡೆಸಲಿದೆ.

ಸರ್ಕಾರದ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ ಜಿಲ್ಲಾ, ಕೇಂದ್ರ ಮತ್ತು ರಾಜ್ಯಗಳ ಸಾರ್ವಜನಿಕ ಆಡಳಿತ ಸಂಸ್ಥೆಗಳಿಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಸ್ತಿ ವಿತರಣೆ ಮಾಡಲಿದ್ದಾರೆ.