ಅರುಣಾಚಲದಲ್ಲಿ 6 ಹೆಸರು ಬದಲಾಯಿಸುವ ಚೀನಾ ಕ್ರಮಕ್ಕೆ ಭಾರತ ಆಕ್ಷೇಪ

ಅರುಣಾಚಲ ಪ್ರದೇಶದ ಆರು ತಾಣಗಳ ಹೆಸರನ್ನು ಬದಲಿಸಬೇಕೆಂಬ ಚೀನಾ ದೇಶದ ಕ್ರಮಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿದ್ದು, ಹೀಗೆ ಮಾಡುವುದರಿಂದ ಅಕ್ರಮ ಸ್ವಾಧೀನವನ್ನು ಸಕ್ರಮ ಸ್ವಾಧೀನ ಎಂದು ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಗಂಭೀರ ಧ್ವನಿಗಳಲ್ಲಿ ಪ್ರತಿಕ್ರಿಯಿಸಿದೆ.

ಅರುಣಾಚಲ ಪ್ರದೇಶ ಎಂದಿಗೂ ಭಾರತದ ಅವಿಭಾಜ್ಯ ಅಂಗವಾಗಿದ್ದು, ಮುಂದೆಯೂ ಅದು ಹಾಗೇ ಉಳಿದುಕೊಳ್ಳಲಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಗೋಪಾಲ್ ಬಾಗ್ಲೆ ಹೇಳಿದ್ದಾರೆ.

ಹೆಸರು ಬದಲಾವಣೆ ಬಗ್ಗೆ ಬುಧವಾರ ತೀರ್ಮಾನ ಪ್ರಕಟಿಸಿದ್ದ ಚೀನಾ, ಇದು ಕಾನೂನುಬದ್ಧ ಪ್ರಕ್ರಿಯೆ ಎಂದೂ ಸಮರ್ಥಿಸಿಕೊಂಡಿತ್ತು. ದಲೈ ಲಾಮಾ ಅರುಣಾಚಲ ಪ್ರದೇಶ ಭೇಟಿಗೆ ತೀವ್ರ ಅಸಮಾಧಾನ ಹೊರಹಾಕಿದ ನಂತರ ಚೀನಾ ಈ ತೀರ್ಮಾನ ತೆಗೆದುಕೊಂಡಿರುವುದು ವಿವಾದಕ್ಕೆ ಗ್ರಾಸವಾಗಿದೆ.