ಇಂಡೋನೇಷ್ಯಾ ಜತೆಗಿನ ಭದ್ರತಾ ಸಂಬಂಧದಲ್ಲಿ ಸುಧಾರಣೆ: ಮೈಕ್ ಪೆನ್ಸ್

ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ಸ್ವತಂತ್ರ ನೌಕಾ ಸಂಚಾರಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಇಂಡೋನೇಷ್ಯಾ ಜತೆಗೆ ಭ್ರದತಾ ಸಂಬಂಧವನ್ನು ಗಟ್ಟಿಗೊಳಿಸುವುದಾಗಿ ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಹೇಳಿದ್ದಾರೆ.

ಜಕಾರ್ತಾದಲ್ಲಿ ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೊಡೊ ಅವರನ್ನು ಭೇಟಿ ಮಾಡಿದ ಪೆನ್ಸ್, ಆಗ್ನೇಯ ಏಷ್ಯಾದಲ್ಲಿನ ಶಾಂತಿ ಮತ್ತು ಅಭಿವೃದ್ಧಿಗೆ ಬೇಕಾದ ಕಾನೂನು ವ್ಯವಸ್ಥೆಗಳನ್ನು ಅಮೆರಿಕ ಸದಾ ಪ್ರೋತ್ಸಾಹಿಸುತ್ತಲೇ ಬಂದಿದೆ ಎಂದು ತಿಳಿಸಿದರು.