ಏಪ್ರಿಲ್ 24ರಿಂದ ಉಪ ರಾಷ್ಟ್ರಪತಿ ಹಮೀದ್ ಹನ್ಸಾರಿ ಅರ್ಮೇನಿಯ, ಪೊಲಾಂಡ್ ಪ್ರವಾಸ

ಸೋಮವಾರದಿಂದ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಅರ್ಮೇನಿಯ, ಪೊಲಾಂಡ್ ರಾಷ್ಟ್ರಗಳಿಗೆ ಐದು ದಿನಗಳ ಪ್ರವಾಸಗೈಯಲಿದ್ದಾರೆ. 2 ದೇಶಗಳಿಗೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ಅವರು ಸಭೆ ನಡೆಸಲಿದ್ದಾರೆ. ಈ ಎರಡು ದೇಶಗಳಿಗೆ ಅನ್ಸಾರಿ ಅವರು ಮೊದಲ ಬಾರಿಗೆ ಭೇಟಿ ನೀಡುತ್ತಿದ್ದಾರೆ ಎಂದು ಪೂರ್ವ ವಿಭಾಗದ ಕಾರ್ಯದಶಿ ಪ್ರೀತಿ ಸರಣ್ ಮಾಹಿತಿ ನೀಡಿದ್ದಾರೆ.

ಭಾರತ ಮತ್ತು ಅರ್ಮೇನಿಯ ನಡುವಿನ ರಾಜತಾಂತ್ರಿಕ ಸಂಬಂಧ 25 ವರ್ಷ ಪೂರೈಸಿದ್ದು, ಅನ್ಸಾರಿ ಭೇಟಿ ಮಹತ್ವ ಪಡೆದುಕೊಂಡಿದೆ. ಅವರು ಅರ್ಮೇನಿಯಾ ಸ್ಟೇಟ್ ವಿವಿಯಲ್ಲಿ ಭಾಷಣ ಮಾಡಲಿದ್ದಾರೆ ಎಂದು ಪ್ರೀತಿ ಸರಣ್ ಹೇಳಿದ್ದಾರೆ. ಮಂಗಳವಾರ ಅನ್ಸಾರಿ ಅರ್ಮೇನಿಯ ತಲುಪಲಿದ್ದು, ಅಧ್ಯಕ್ಷ ಸೆರ್ಜ್ ದರ್ಶನ್ ಮತ್ತು ಪ್ರಧಾನಿ ಕರೆನ್ ಕರಪೆಟ್ಯಾನ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಪೊಲಾಂಡ್ ನ ವರ್ಸಾವ್ ನಲ್ಲಿ ಅಧ್ಯಕ್ಷ, ಪ್ರಧಾನಿ ಮತ್ತು ಸೆನೆಟ್ ನ ಸ್ಪೀಕರ್ ಜತೆ ಮಾತುಕತೆ ನಡೆಸಲಿದ್ದಾರೆ.