ಚಾಂಪಿಯನ್ಸ್ ಟ್ರೋಫಿಗೆ ಆಸಿಸ್ ತಂಡ ಪ್ರಕಟ

ಜೂನ್ ಮೊದಲ ವಾರದಿಂದ ಪ್ರಾರಂಭಗೊಳ್ಳಲಿರುವ ಚಾಂಪಿಯನ್ಸ್ ಟ್ರೋಫಿಗೆ ಆಸ್ಟ್ರೇಲಿಯಾ ತಂಡವು ನಾಲ್ವರು ವೇಗಿಗಳನ್ನು ಒಳಗೊಂಡ 15 ಜನರ ತಂಡ ಪ್ರಕಟಿಸಿದೆ. . ಮಿಚೆಲ್ ಸ್ಟಾರ್ಕ್, ಜೇಮ್ಸ್ ಪ್ಯಾಟಿನ್ಸನ್, ಜೋಷ್ ಹೆಜಲ್ ವುಡ್ ಮತ್ತು ಪ್ಯಾಟ್ ಕುಮಿನ್ಸ್ ತಂಡದಲ್ಲಿದ್ದಾರೆ. ಆದರೆ ಆಲ್ ರೌಂಡರ್ ಜೇಮ್ಸ್ ಫಾಕ್ನರ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ.

ಹೊಡೆಬಡಿ ದಾಂಡಿಗ ಕ್ರಿಸ್ ಲಿನ್ ಕೂಡ ತಂಡದಲ್ಲಿದ್ದಾರೆ.  ಆಸ್ಟ್ರೇಲಿಯ ತಂಡವು ಇಂಗ್ಲೆಂಡ್, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ತಂಡದೊಂದಿಗೆ ಗ್ರೂಪ್ ಎ ಯಲ್ಲಿದೆ.  ಭಾರತವು ಗ್ರೂಪ್ ಬಿನಲ್ಲಿದೆ. ಗ್ರೂಪ್ ಬಿ ನಲ್ಲಿ ದಕ್ಷಿಣ ಅಫ್ರಿಕಾ, ಪಾಕಿಸ್ತಾನ ಮತ್ತು ಶ್ರಿಲಂಕಾಗಳಿವೆ.