ಚೀನಾ ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ ಭಾರತದ ಸವಾಲು ಅಂತ್ಯ

ಚೀನಾದ ಗುಂಗುಝು ನಲ್ಲಿ ನಡೆಯುತ್ತಿರುವ ಚೀನಾ ಮಾಸ್ಟರ್  ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಬ್ಯಾಡ್ಮೀಂಟನ್  ಟೂರ್ನಿಯಲ್ಲಿ ಭಾರತದ ಅಭಿಯಾನ ಗುರುವಾರವೇ ಅಂತ್ಯಗೊಂಡಿದೆ. ಪುರುಷರ ಸಿಂಗಲ್ಸ್ ನ ಪ್ರಿ-ಕ್ವಾರ್ಟರ್ ಫೈನಲ್ಸ್ ನಲ್ಲಿ ಭಾರತದ ಪರುಪಳ್ಳಿ ಕಷ್ಯಪ್ ಮತ್ತು ಹರ್ಷೀಲ್ ದನಿ ಸೋತು ಹೊರಬಿದ್ದಿದ್ದಾರೆ.

ಚೀನಾದ ಕ್ಯೂ ಬಿನ್ ಕಷ್ಯಪ್ ಅವರನ್ನು 10-21 22-20 13-21 ಅಂತರದಿಂದ ಮಣಿಸಿದರು. ಚೀನಾದ ಫ್ಲೆಕ್ಷಿಯಂಗ್ ಸನ್ ಅವರು ಧನಿ ಅವರನ್ನು 21-17, 21-18 ಅಂತರದಿಂದ ಮಣಿಸಿದ್ದಾರೆ.