ಝಾಕೀರ್ ನಾಯಕ್ ವಿರುದ್ಧ ಜಾಮೀನು ರಹಿತ ವಾರಂಟ್

ಇಸ್ಲಾಂನ ವಿವಾದಿತ ಧರ್ಮಗುರು ಝಾಕಿರ್ ನಾಯಕ್ ವಿರುದ್ಧ ಮುಂಬೈನ ಎನ್ ಐ ಎ ವಿಶೇಷ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಭಯೋತ್ಪಾದನೆ ಪ್ರಕರಣವೊಂದರಲ್ಲಿ ಅವರ ಪಾತ್ರವಿರುವ ಆರೋಪದ ಹಿನ್ನೆಲೆಯಲ್ಲಿ ವಾರಂಟ್ ಜಾರಿ ಮಾಡಲಾಗಿದೆ.

ಕಾನೂನು ವಿರೋಧಿ (ನಿಯಂತ್ರಣ) ಕಾಯ್ದೆ ಅಡಿಯಲ್ಲಿ ಝಾಕೀರ್ ನಾಯಕ್ ವಿರುದ್ಧ ಎನ್ ಐ ಎ ಕಳೆದ ವರ್ಷ ದೂರು ದಾಖಲಿಸಿಕೊಂಡಿತ್ತು. ಮೂರು ಬಾರಿ ಸಮನ್ಸ್ ಜಾರಿ ಮಾಡಿದ್ದರೂ ನಾಯಕ್ ತನಿಖೆಗೆ ಹಾಜರಾಗಿರಲಿಲ್ಲ ಎಂದು ಕೋರ್ಟಿಗೆ ತಿಳಿಸಿದ್ದ ತನಿಖಾ ಏಜೆನ್ಸಿ ಅಧಿಕಾರಿಗಳು, ಭಾರತಕ್ಕೆ ಆತನನ್ನು ಕರೆತರುವ ನಿಟ್ಟಿನಲ್ಲಿ ಇಂಟರ್ ಪೋಲ್ ನೆರವು ಪಡೆಯಬೇಕು ಎಂದು ಹೇಳಿದೆ.