ತಿಂಗಳಾಂತ್ಯಕ್ಕೆ ಶ್ರೀಲಂಕಾ ಪ್ರಧಾನಿ ಭಾರತ ಭೇಟಿ

ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಅವರು ಈ ತಿಂಗಳ 25ರಿಂದ 29ರ ತನಕ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. 26ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಲಂಕಾ ಪ್ರಧಾನಿ ಜತೆ ಭೋಜನ ಸಭೆ ಏರ್ಪಡಿಸಿದ್ದಾರೆ.

 ದೆಹಲಿಯಲ್ಲಿ ರಾಜತಾಂತ್ರಿಕ ಸಭೆ ಕೈಗೊಂಡ ಬಳಿಕ ಶ್ರೀಲಂಕಾ ಪ್ರಧಾನಿಯವರು ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.