ನಾಲ್ಕೋದ 9.2 ಶೇ. ಪಾಲನ್ನು ಮಾರಾಟ ಮಾಡಿದ ಸರ್ಕಾರ

ನ್ಯಾಷನಲ್ ಅಲ್ಯುಮೀನಿಯಂ ಕಂಪನಿ ಲಿಮಿಟೆಡ್ ನಲ್ಲಿ 9.2 ಶೇ. ಪಾಲನ್ನು ಮಾರಾಟ ಮಾಡುವ ಮೂಲಕ ಕೇಂದ್ರ ಸರ್ಕಾರ ರೂ. 1200 ಕೋಟಿ ಹಣ ವೃದ್ಧಿಸಿಕೊಂಡಿದೆ.

ಮಾರುಕಟ್ಟೆಯಲ್ಲಿ ಭಾರೀ ವ್ಯವಹಾರ ಕಂಡುಬಂದ ಹಿನ್ನೆಲೆಯಲ್ಲಿ ನಿಗದಿತ ಪ್ರಮಾಣಕ್ಕಿಂತ (9.2 ಶೇ) ಪಾಲನ್ನು ಮಾರಾಟ ಮಾಡಲು ಸರ್ಕಾರ ನಿರ್ಧರಿಸಿತ್ತು. ಇದರಿಂದಾಗಿ ನಾಲ್ಕೋದಲ್ಲಿ ಸರ್ಕಾರದ ಷೇರು 65.37 ಶೇಕಡಾಕ್ಕೆ ಇಳಿದಿದೆ. ಬಂಡವಾಳ ಹಿಂತೆಗೆತದ ಮುಖೇನ ಈ ಹಣಕಾಸು ವರ್ಷದಲ್ಲಿ ರೂ. 72,500 ತಲುಪಬೇಕೆಂದು ಸರ್ಕಾರ ಗುರಿ ಇಟ್ಟುಕೊಂಡಿತ್ತು. 2016-17 ಹಣಕಾಸು ವರ್ಷದಲ್ಲಿ ಸರ್ಕಾರ ಬಂಡವಾಳ ಹಿಂತೆಗೆತದ ಮೂಲಕ ರೂ 46,247 ಸಂಪಾದಿಸಿತ್ತು.