ನೇಪಾಳ: ರಾಷ್ಟ್ರೀಯ ಜನತಾ ಪಾರ್ಟಿ ರಚನೆ

ತಮ್ಮ ರಾಜಕೀಯ ಉದ್ದೇಶಗಳನ್ನು ಈಡೇರಿಸುವ ಉದ್ದೇಶದಿಂದ ನೇಪಾಳದ ಐದು ಪ್ರಮುಖ ಮಾಧೆಸ್ ರಾಜಕೀಯ ಪಕ್ಷಗಳು ರಾಷ್ಟ್ರೀಯ ಜನತಾ ಪಾರ್ಟಿಯನ್ನು ರಚನೆ ಮಾಡಿವೆ.

ತರಾಯ್ ಲೋಕತಂತ್ರಿಕ್ ಪಾರ್ಟಿ, ಸದ್ಭಾವನಾ ಪಾರ್ಟಿ, ರಾಷ್ಟ್ರೀಯ ಮಾಧೆಸ್ ಸಮಾಜವಾದಿ ಪಾರ್ಟಿ, ತರಾಯ್ ಮಾಧೆಸ್ ಸದ್ಭಾವನಾ ಪಾರ್ಟಿ ಮತ್ತು ಮಾಧೆಸಿ ಜನಾಧಿಕಾರ್ ಫೊರಂ ಗಣ ತಂತ್ರಿಕ್ ಪಕ್ಷಗಳು ಒಗ್ಗೂಡಿ, ಕಠ್ಮಂಡುವಿನಲ್ಲಿ ತಮ್ಮ ನೂತಕ ಒಕ್ಕೂಟದ ಬಗ್ಗೆ ಘೋಷಣೆ ಮಾಡಿದವು. ಚುನಾವಣೆ ಚಿಹ್ನೆಯನ್ನು ಅನಾವರಣಗೊಳಿಸಿದ ಬಳಿಕ ಸಾಮೂಹಿಕ ನಾಯಕತ್ವದಲ್ಲಿ ತಾವು ಮುನ್ನಡೆಯುವುದಾಗಿ ಒಕ್ಕೂಟದ ನಾಯಕರು ತಿಳಿಸಿದರು.