ನೋಟ್ ಬ್ಯಾನ್: ಆರ್ ಬಿ ಐ ಗವರ್ನರ್ ವಿಚಾರಣೆಗೆ ಮುಂದಾದ ಸಂಸದೀಯ ಸಮಿತಿ

ನೋಟು ರದ್ದತಿ ಬಗ್ಗೆ ಮೇ 25ರಂದು ಸಂಸದೀಯ ಸಮಿತಿ ಮುಂದೆ ಹಾಜರಾಗುವಂತೆ ಆರ್ ಬಿ ಐ ಗವರ್ನರ್ ಉರ್ಜಿತ್ ಪಟೇಲ್ ಅವರಿಗೆ ತಿಳಿಸಲಾಗಿದೆ.

ನೋಟು ರದ್ದತಿ ಕುರಿತ ಚರ್ಚೆ ಇನ್ನೂ ಅಂತ್ಯಗೊಂಡಿಲ್ಲದ ಹಿನ್ನೆಲೆಯಲ್ಲಿ ಉರ್ಜಿತ್ ಪಟೇಲ್ ಅವರನ್ನು ಮತ್ತೊಮ್ಮೆ ಸಂಸದೀಯ ಸಮಿತಿ ಮುಂದೆ ಕರೆಸಿ ಚರ್ಚಿಸಬೇಕು ಎಂದು ಸಮಿತಿ ತೀರ್ಮಾನಿಸಿತು ಎಂದು ಮೂಲಗಳು ತಿಳಿಸಿವೆ.

ಮಾಜಿ ಕೇಂದ್ರ ಸಚಿವ, ಸಂಸದ ವೀರಪ್ಪ ಮೊಯಿಲಿ ಅವರು ಸಂಸದೀಯ ಸಮಿತಿ ನೇತೃತ್ವ ವಹಿಸಿದ್ದು, ಕಳೆದ ಜನವರಿ ತಿಂಗಳಲ್ಲಿ ಹಣಕಾಸು ಇಲಾಖೆ ಮತ್ತು ಆರ್ ಬಿ ಐ ಉನ್ನತ ಅಧಿಕಾರಿಗಳನ್ನು ಕರೆಸಿ ವಿಚಾರಣೆ ನಡೆಸಿತ್ತು.