ವಿಶ್ವ ರಾಂಕಿಂಗ್ ನಲ್ಲಿ ಸಿಂಧುವಿಗೆ 3ನೇ ಸ್ಥಾನ

ವಿಶ್ವ ಬಿಡಬ್ಲ್ಯುಎಫ್ ರಾಂಕಿಂಗ್ ನಲ್ಲಿ ಭಾರತದ ಐವರು ಶಟ್ಲರ್ ಗಳು ಉನ್ನತ ಹಂತಕ್ಕೇರಿದ್ದಾರೆ. ಸಿಂಗಾಪುರ್ ಸೂಪರ್ ಸಿರೀಸ್ ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಹಿನ್ನೆಲೆಯಲ್ಲಿ ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಪಿ.ವಿ. ಸಿಂಧು ರಾಂಕಿಂಗ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚು ಗೆದ್ದಿದ್ದ ಸೈನಾ ನೆಹವಾಲ್ 8ನೇ ಸ್ಥಾನಕ್ಕೇರಿದ್ದಾರೆ.

ಪುರುಷರ ಸಿಂಗಲ್ಸ್ ನಲ್ಲಿ ಅಜಯ್ ಜಯರಾಮ್ ಅವರು 13ನೇ ಸ್ಥಾನದಲ್ಲಿದ್ದು, ಕಿಡಂಬಿ ಶ್ರೀಕಾಂತ್ ಮತ್ತು ಬಿ. ಸಾಯಿ ಪ್ರಣೀತ್ ಕ್ರಮವಾಗಿ 21 ಮತ್ತು 22ನೇ ಸ್ಥಾನದಲ್ಲಿದ್ದಾರೆ.