ವೀಸಾ ಸಮಸ್ಯೆ ನಿವಾರಣೆಗೆ ರಚನಾತ್ಮಕ ಚರ್ಚೆ: ಸೀತಾರಾಮನ್

ಅಮೆರಿಕ ಮತ್ತು ಇತರ ರಾಷ್ಟ್ರಗಳೊಂದಿಗೆ ವೀಸಾ ಬಿಕ್ಕಟ್ಟಿನ ಬಗ್ಗೆ ರಚನಾತ್ಮಕ ಚರ್ಚೆ ನಡೆಸುವುದಾಗಿ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ವಿಶ್ವ ವಾಣಿಜ್ಯ ಒಕ್ಕೂಟಕ್ಕೆ (ಡಬ್ಲ್ಯುಟಿಒ) ನಾವು ಈಗಾಗಲೇ ನಮ್ಮ ಪ್ರಸ್ತಾವನೆಗಳನ್ನು ಕಳುಹಿಸಿಕೊಟ್ಟಿದ್ದೇವೆ ಮತ್ತು ಸದಸ್ಯ ದೇಶಗಳು ಅವುಗಳ ಅಧ್ಯಯನ ನಡೆಸಬೇಕು ಎಂದು ವಿನಂತಿಸಿಕೊಂಡಿದ್ದೇವೆ ಎಂದು ತಿಳಿಸಿದರು.

ರೂಪಾಯಿ ಮೌಲ್ಯ ಹೆಚ್ಚುವುದು ಬಲಾಢ್ಯ ಆರ್ಥಿಕತೆಯ ಸಂಕೇತ ಮತ್ತು ರಫ್ತು ವ್ಯವಹಾರದಲ್ಲೂ ಇದು ನಿರ್ಣಾಯಕ ಪಾತ್ರವಹಿಸುತ್ತದೆ. ಉತ್ತಮ ಮೂಲ ಸೌಕರ್ಯವೂ ರಫ್ತಿಗೆ ಅತ್ಯಗತ್ಯ ಎಂದು ಅವರು ಅಭಿಪ್ರಾಯಪಟ್ಟರು.