30ಕ್ಕೆ ಪ್ರಧಾನಿ ಮೋದಿ ಅವರ 31ನೇ ಮನ್ ಕಿ ಬಾತ್

ಈ ತಿಂಗಳ 30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 31ನೇ ಮನ್ ಕಿ ಬಾತ್ (ಆಕಾಶವಾಣಿಯಲ್ಲಿ) ಕಾರ್ಯಕ್ರಮದಲ್ಲಿ ದೇಶ ಉದ್ದೇಶಿಸಿ ಮಾತನಾಡಲಿದ್ದಾರೆ. My Gov Open Forumನಲ್ಲಿ ಜನರು ತಮ್ಮ ಅಭಿಪ್ರಾಯ ಹಂಚಿಕೊಳ್ಳಬಹುದಾಗಿದ್ದು, 1800-3000-7800 ಟಾಲ್ ಫ್ರೀ ನಂಬರಿಗೆ ಕರೆ ಮಾಡಿ ತಮ್ಮ ಸಂದೇಶವನ್ನು ರೆಕಾರ್ಡ್ ಮಾಡಿ ಕಳುಹಿಸಬಹುದು. ಅಥವಾ 1922ಕ್ಕೆ ಮಿಸ್ ಕಾಲ್ ನೀಡಿ, ಮೊಬೈಲ್ ಗೆ ಮಸೇಜ್ ಮೂಲಕ ಬರುವ ಲಿಂಕ್ ನಿಂದ ಪ್ರಧಾನಿ ಅವರಿಗೆ ಸಲಹೆಗಳನ್ನು ನೀಡಬಹುದು.

ಪ್ರಧಾನಿ ಕಚೇರಿ, ಪ್ರಸಾರ ಮತ್ತು ಮಾಹಿತಿ ಇಲಾಖೆಯ ಯೂ ಟ್ಯೂಬ್ ಚಾನೆಲ್ ಮತ್ತು ಡಿಡಿ ನ್ಯೂಸ್ ನಲ್ಲೂ ಇದು ಪ್ರಸಾರವಾಗಲಿದೆ. ಮನ್ ಕಿ ಬಾತ್ ಹಿಂದಿಯಲ್ಲಿ ಪ್ರಸಾರಗೊಂಡ ಕೂಡಲೇ ಪ್ರಾದೇಶಿಕ ಭಾಷೆಗಳಲ್ಲಿ ಆಕಾಶವಾಣಿ ಇದನ್ನು ಪ್ರಸಾರ ಮಾಡಲಿದೆ. ರಾತ್ರಿ 8 ಗಂಟೆಗೂ ಪ್ರಾದೇಶಿಕ ಭಾಷೆಗಳಲ್ಲಿ ಇದರ ಮರು ಪ್ರಸಾರ ಆಗಲಿದೆ.