ಆಪರೇಷನ್ ಕ್ಲೀನ್ ಮನಿಗೆ ಚಾಲನೆ

ದೇಶದಲ್ಲಿ ನೋಟು ರದ್ದತಿ ಕ್ರಮ ಜಾರಿಗೆ ಬಂದ ಬಳಿಕ ಇನ್ ಕಮ್ ಟ್ಯಾಕ್ಸ್ ಪೈಲಿಂಗ್ ಮತ್ತು ತೆರಿಗೆ ಸಂಗ್ರಹ ಹೆಚ್ಚಳವಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 
 
ನವದೆಹಲಿಯಲ್ಲಿ ಕೇಂದ್ರ ತೆರಿಗೆ ಇಲಾಖೆಯ ಕ್ಲೀನ್ ಮನಿ ವೆಬ್ ಸೈಟ್ ಅನಾವರಣಗೊಳಿಸಿ ಮಾತನಾಡಿದ ಅವರು, ತೆರಿಗೆ ವಂಚನೆ ಪತ್ತೆ ಹಚ್ಚುವುದು ಸುಲಭವಾಗಿದ್ದು, ಈ ವಂಚನೆ ಜಾಲದಲ್ಲಿ ತೊಡಗಿಕೊಳ್ಳುವುದು ನಿರೀಕ್ಷಿಸಿದಷ್ಟು ಸುಲಭವಿಲ್ಲ ಎಂದು ಹೇಳಿದರು.  
 
8ನೇ ನವೆಂಬರ್ ನಿಂದ 30 ಡಿಸೆಂಬರ್ ವರೆಗಿನ ಅಪನಗದೀಕರಣದ ಅವಧಿಯಲ್ಲಿ 18 ಲಕ್ಷ ಮಂದಿಯ ಆದಾಯದ ಪ್ರಮಾಣಕ್ಕೂ ಮತ್ತು ಅವರು ಬ್ಯಾಂಕ್ ಗಳಲ್ಲಿ ಜಮೆ ಮಾಡಿದ ನಗದಿನ ಪ್ರಮಾಣದಲ್ಲಿ ಸಾಕಷ್ಟು ವ್ಯತ್ಯಾಸವಿರುವುದು ಗೊತ್ತಾಗಿದೆ ಎಂದು ಜೇಟ್ಲಿ ಮಾಹಿತಿ ನೀಡಿದರು.