ಈಶಾನ್ಯದಲ್ಲಿನ ತೀವ್ರಗಾಮಿತ್ವ ಭಯೋತ್ಪಾದನೆಗೆ ತಿರುಗಬಹುದು: ರಾಜನಾಥ್

ಈಶಾನ್ಯ ರಾಜ್ಯಗಳಲ್ಲಿನ ಧಾರ್ಮಿಕ ತೀವ್ರವಾದವನ್ನು ನಿಯಂತ್ರಣಕ್ಕೆ ತರದಿದ್ದರೆ ಇದು ದೇಶದ ಭದ್ರತೆಗೆ ಅಪಾಯಕಾರಿ ಎನಿಸಿಕೊಳ್ಳಬಹುದು ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ. 
 
ನವದೆಹಲಿಯಲ್ಲಿ ಆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಡಿಜಿಪಿಗಳೊಂದಿಗೆ ಭದ್ರತಾ ಸ್ಥಿತಿಗಳ ಕುರಿತು ಪರಿಶೀಲನೆ ನಡೆಸಿದ ವೇಳೆ ಅವರು ಈ ಅಭಿಪ್ರಾಯ ಹೊರಹಾಕಿದರು.  
 
ಈ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಇತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. 
 
ಈ ಭಾಗದಲ್ಲಿರುವ ಅಕ್ರಮ ಶಸ್ತ್ರಾಸ್ತ್ರಗಳ ಸಾಗಾಟ ಹಾಗೂ ಖೋಟಾ ನೋಟುಗಳ ಚಲಾವಣೆ ತಡೆಯಲು ವ್ಯವಸ್ಥಿತ ಹೋರಾಟ ನಡೆಸಬೇಕು ಎಂದು ಸಿಂಗ್ ಸಲಹೆ ನೀಡಿದರು.