ಕರಾವಳಿ ವಲಯ ಯೋಜನೆ ವಿಳಂಬ: ಎನ್ಜಿಟಿ ಕೆಂಡ

ಕರಾವಳಿ ವಲಯ ವ್ಯವಸ್ಥೆ ಯೋಜನೆ ರೂಪಿಸುವುದರಲ್ಲಿ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ವಿಳಂಬ ಧೋರಣೆಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಕಿಡಿಕಾರಿದೆ. 
 
ಸಂಬಂಧಪಟ್ಟ ಪ್ರಾಧಿಕಾರಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆಯೇ ವಿನಃ ಯೋಜನೆ ರೂಪಿಸುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ನ್ಯಾಯಾಧಿಕರಣ ಅಸಮಾಧಾನ ಹೊರಹಾಕಿತು.  
 
ಈ ಬಗ್ಗೆ ತಕ್ಷಣವೇ ಇಲಾಖೆಯ ಜಂಟಿ ಕಾರ್ಯದರ್ಶಿ ನ್ಯಾಯಾಧಿಕರಣಕ್ಕೆ ಅಫಿಡವಿಟ್ ಸಲ್ಲಿಸಬೇಕು ಮತ್ತು ಹೆಚ್ಚಿನ ಆದ್ಯತೆ ನೀಡುವುದಲ್ಲದೆ ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿತು. 
 
ಕರಾವಳಿ ಪ್ರದೇಶಗಳಲ್ಲಿ ಪರಿಸರ, ಆರ್ಥಿಕತೆ, ಮಾನವ ಆರೋಗ್ಯ, ಚಟುವಟಿಕೆಗಳ ನಡುವಿನ ಸಮತೋಲನ ಕಾಪಾಡಲು ಕರಾವಳಿ ವಲಯ ಯೋಜನೆ ರೂಪಿಸಲು ಉದ್ದೇಶಿಸಲಾಗಿದೆ.