ತ್ರಿವಳಿ ತಲಾಖ್ ಗೆ ನಂಬಿಕೆಯ ವಿಷಯ: ಎಐಎಂಪಿಎಲ್ಬಿ ವಾದ

ಕಳೆದ 1400  ವರ್ಷಗಳಿಂದ ಮುಸ್ಲಿಂ ಸಮುದಾಯ ತ್ರಿವಳಿ ತಲಾಖ್ ನ್ನು ಒಂದು ಧಾರ್ಮಿಕ ನಂಬಿಕೆಯ ರೀತಿಯಲ್ಲಿ ಆಚರಿಸಿಕೊಂಡು ಬಂದಿದೆ. ಹೀಗಾಗಿ ಸಾಂವಿಧಾನಿಕ ನೈತಿಕತೆ ಮತ್ತು ಸಮಾನತೆಯ ವಿಚಾರ ಇಲ್ಲಿ ಬರುವುದಿಲ್ಲ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸುಪ್ರೀಂಕೋರ್ಟ್ ನಲ್ಲಿ ವಾದಿಸಿದೆ.  
 
ಹೇಗೆ ಶ್ರೀ ರಾಮ ಅಯೋಧ್ಯೆಯಲ್ಲಿ ಜನಿಸಿದ್ದಾರೆ ಎಂದು ಹಿಂದುಗಳು ಭಾವಿಸಿದ್ದಾರೋ ಹಾಗೆ ಮುಸ್ಲಿಮರು ತ್ರಿವಳಿ ತಲಾಖ್ ಬಗ್ಗೆ ನಂಬಿಕೆ ಹೊಂದಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಮತ್ತು ಸುಪ್ರೀಂಕೋರ್ಟ್ ವಕೀಲ ಎಐಎಂಪಿಎಲ್ಬಿ ಪರ ವಾದ ಮಂಡಿಸಿದರು. 
 
ತ್ರಿವಳಿ ತಲಾಖ್ ಬಗ್ಗೆ ಹದಿತ್ ನಲ್ಲಿ ಕಾಣಬಹುದಾಗಿದೆ ಮತ್ತು ಇದು ಪ್ರವಾದಿ ಮಹಮ್ಮದ್ ರ ಬಳಿಕ ಅಸ್ತಿತ್ವಕ್ಕೆ ಬಂತು ಎಂದು ಸಿಬಲ್ ನ್ಯಾಯಪೀಠಕ್ಕೆ ವಿವರಿಸಿದ್ದಾರೆ.