ಖ್ಯಾತ ಜೀವವಿಜ್ಞಾನಿ ದೇವಿ ಬರ್ಮನ್ ಗೆ ಗ್ರೀನ್ ಆಸ್ಕರ್ ಪ್ರಶಸ್ತಿ

ವನ್ಯಜೀವಿ ಸಂರಕ್ಷಕಿ ಪೂರ್ಣಿಮಾ ದೇವಿ ಬರ್ಮನ್ ಅವರಿಗೆ 2017ರ ಪ್ರತಿಷ್ಟಿತ ವೈಟ್ಲಿ ಪ್ರಶಸ್ತಿ (ಗ್ರೀನ್ ಆಸ್ಕರ್) ಯನ್ನು ಘೋಷಿಸಲಾಗಿದೆ. 66 ದೇಶಗಳ ಆಯ್ದ 169 ಸಂಶೋಧಕರಲ್ಲಿ ಬರ್ಮನ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.
ಅಸ್ಸಾಂನ ಹಾರ್ಗಿಲಾ ರಕ್ಷಣೆಗೆ ಬರ್ಮನ್ ಅವರು ನಡೆಸಿದ ಹೋರಾಟ, ಪ್ರಯತ್ನಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.