ಜನವರಿ 1ರಿಂದ ಹೆರಿಗೆ ಭತ್ಯೆ ಯೋಜನೆ ಜಾರಿ

ದೇಶಾದ್ಯಂತ ಹೆರಿಗೆ ಭತ್ಯೆ ಯೋಜನೆಯನ್ನು ಜನವರಿ 1ರಿಂದ ಜಾರಿಗೊಳಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ದೇಶದ ಎಲ್ಲಾ ಜಿಲ್ಲೆಗಳಿಗೆ ಈ ಯೋಜನೆ ವಿಸ್ತರಣೆಯಾಗಲಿದೆ.
ಈ ಯೋಜನೆ ಮೊದಲ ಶಿಶುವಿನ ಜನನದ ಸಂದರ್ಭದಲ್ಲಿ ಮಾತ್ರ ಇದು ಅನ್ವಯವಾಗಲಿದೆ. ಹೆರಿಗೆ ಪೂರ್ವದಲ್ಲಿ ಹಾಗೂ ನಂತರದಲ್ಲಿ ಮಹಿಳೆಯರು ಸೂಕ್ತ ಪ್ರಮಾಣದಲ್ಲಿ ವಿಶ್ರಾಂತಿ ಪಡೆಯುವ ಅಗತ್ಯವಿರುವುದರಿಂದ ಆ ಅವಧಿಯಲ್ಲಿ ಸಿಗದ ವೇತನದ ಬದಲಿಗೆ ಪರಿಹಾರ ಹಣವನ್ನು ನೀಡುವುದು ಈ ಯೋಜನೆಯ ಉದ್ದೇಶ.