ಇಂಡಿಯಾ ಮತ್ತು ಬೆಲ್ಜಿಯಂ ಮಧ್ಯೆ ಕ್ರಿಮಿನಲ್ ಪ್ರಕರಣಗಳಲ್ಲಿನ ಎಮ್ಎಲ್ಎಟಿ ಬಗ್ಗೆ ಮಾತುಕತೆ

ನವದೆಹಲಿಯಲ್ಲಿ ನಿನ್ನೆ ಅಪರಾಧ ಪ್ರಕರಣಗಳಲ್ಲಿನ ಪ್ರಸ್ತಾಪಿತ ಪರಸ್ಪರ ಕಾನೂನು ನೆರವು ಒಪ್ಪಂದ (ಎಮ್ಎಲ್ಎಟಿ) ಬಗ್ಗೆ  ಭಾರತ ಮತ್ತು ಬೆಲ್ಜಿಯಂ ಮಧ್ಯೆ ಚರ್ಚೆ ನಡೆದಿದೆ.

ಅಧಿಕೃತ ಪ್ರಕಟಣೆಯ ಪ್ರಕಾರ ಸಭೆಯು ಸ್ನೇಹ ಮತ್ತು ಸೌಹಾರ್ದಯುತವಾಗಿ ನಡೆದಿದೆ. ಬೆಲ್ಜಿಯಂ ಪ್ರತಿನಿಧಿಗಳ ನೇತೃತ್ವವನ್ನು ಸ್ಟಿವನ್ ಲಿಮ್ ಬೋರ್ಗ್, ಅವರು ವಹಿಸಿದ್ದರು. ಭಾರತದ ನಿಯೋಗದ ನೇತೃತ್ವವನ್ನು ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಬಿಪಿನ್ ಮಲ್ಲಿಕ್ ವಹಿಸಿದ್ದರು.