ಎಫ್ ಬಿಐಯ ಮಾಜಿ ನಿರ್ದೇಶಕ ರಾಬರ್ಟ್ ಮುಲ್ಲೇರ್ ರಷ್ಯಾದ ತನಿಖಾ ತಂಡದ ವಿಶೇಷ ಕೌನ್ಸಿಲ್ 

ಅಮೆರಿಕದ ಎಫ್ ಬಿಐಯ ಮಾಜಿ ನಿರ್ದೇಶಕ ರಾಬರ್ಟ್ ಮುಲ್ಲೇರ್ ಅವರನ್ನು ಅಮೆರಿಕದ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ನಡೆಸಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ರಾಬರ್ಟ್ ಮುಲ್ಲೇರ್ ಅವರನ್ನು ವಿಶೇಷ ಕೌನ್ಸಿಲ್ ಆಗಿ ನೇಮಿಸಲಾಗಿದೆ‌

ಸಾರ್ವಜನಿಕ ಹಿತಾಸಕ್ತಿಯ ನೆಲೆಯಲ್ಲಿ ಹೊರಗಿನ ಒಬ್ಬರನ್ನು ನೇಮಿಸಬೇಕು ಎಂಬ ನೆಲೆಯಲ್ಲಿ ಮುಲ್ಲೇರ್ ನೇಮಕ ನಡೆಸಲಾಗಿದ್ದು ಉಭಯ ರಾಷ್ಟ್ರಗಳು ನೇಮಕಾತಿಯನ್ನು ಸ್ವಾಗತಿಸಿವೆ‌ ಎಂದು ಡೆಪ್ಯುಟಿ ಅಟಾರ್ನಿ ಜನರಲ್ ಹೇಳಿದ್ದಾರೆ.

ಟ್ರಂಪ್‌ ಚುನಾವಣಾ ಪ್ರಚಾರಕ್ಕೆ ರಷ್ಯಾ ಸಹಾಯ ಮಾಡಿದೆ ಎಂದು ಗುಲ್ಲು ಎದ್ದಿತ್ತು.