ಐಪಿಎಲ್: ಮುಂಬೈ ಮತ್ತು ಕೊಲ್ಕತ್ತಾ ಮಧ್ಯೆ ಎರಡನೇ ಕ್ವಾಲಿಫೈಯರ್

ಐಪಿಎಲ್ ಟೂರ್ನಿಯ  ಎರಡನೇ ಕ್ವಾಲಿಫೈಯರ್ ಮುಂಬೈ ಇಂಡಿಯನ್ಸ್ ಮತ್ತು ಕೊಲ್ಕಾತ್ತದ ಮಧ್ಯೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೆಡಿಯಂ ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿನ ವಿಜೇತರು ಟೂರ್ನಿಯ ಫೈನಲ್ ಗೆ ಏರಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ನೊಂದಿಗೆ ಪ್ರಶಸ್ತಿಗಾಗಿ ಕಾದಾಟ ನಡೆಸಲಿದ್ದಾರೆ.

ಮೊದಲ ಕ್ವಾಲಿಫೈಯರ್ ನಲ್ಲಿ ಪುಣೆ ತಂಡವು ಮುಂಬೈ ತಂಡವನ್ನು ಮಣಸಿತ್ತು. ಎಲಿಮೇನರ್ ಪಂದ್ಯದಲ್ಲಿ ಕೊಲ್ಕತ್ತಾ ತಂಡವು ಡಕ್ ವರ್ತ್ ಲೂಯೀಸ್ ನಡಿ ಸನ್ ರೈಸರ್ಸ್ ಹೈದರಾಬಾದ್ ಅನ್ನು ಮಣಿಸಿತ್ತು. ಕೊಲ್ಕತ್ತಾ ಮತ್ತು ಮುಂಬೈ ತಲಾ ಎರಡು ಬಾರಿ ಐಪಿಎಲ್ ಚಾಂಪಿಯನ್ ಗಳಾಗಿವೆ.