ಐಸಿಜೆ ಆದೇಶವು ಪಾಕಿಸ್ತಾನದ ನ್ಯಾಯಾಂಗದ ಮೇಲೆ ಗಂಭೀರ ಪರಿಣಾಮ ಬೀರಲಿದೆ: ಜೇಟ್ಲಿ

ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ನೀಡಿರುವ ಆದೇಶ ಪಾಕಿಸ್ತಾನದ ನ್ಯಾಯಾಂಗದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.

ಐಸಿಜೆ ಸಭೆಯಲ್ಲಿ ಭಾಗವಹಿಸಲು ಶ್ರೀನಗರದಲ್ಲಿ ಇರುವ ಜೇಟ್ಲಿ ಐಸಿಜೆಯ ಆದೇಶವು ಭಾರತದ ನಿಲುವನ್ನು ಬೆಂಬಲಿಸಿದೆ ಎಂದು ಹೇಳಿದ್ದಾರೆ. ಯಾವುದೇ ನ್ಯಾಯಾಂಗ ಪ್ರಕ್ರಿಯೆ ಗೌಪ್ಯವಾಗಿ, ಕತ್ತಲಲ್ಲಿ, ಜನರಿಂದ ದೂರವಿಟ್ಟು ನಡೆಸಿದ್ದೇ ಆದರೆ ಆ ಪೃಕ್ರಿಯೆಗೆ ಪಾವಿತ್ರ್ಯತೆ ಇರುವುದಿಲ್ಲ ಎಂದು ಜೇಟ್ಲಿ ಹೇಳಿದರು.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಕಾರ್ಯತಂತ್ರ ಮತ್ತು ಪ್ರಕರಣದಲ್ಲಿ ವಾದಿಸಿದ ಹರೀಶ್ ಸಾಳ್ವೆ ಅವರನ್ನು ಜೇಟ್ಲಿ ಶ್ಲಾಘಿಸಿದರು. ಭಾರತಕ್ಕೆ ಮೊದಲ ಸುತ್ತಿನಲ್ಲಿ ಜಯ ಸಿಕ್ಕಿದೆ ಎಂದು ಪ್ರಕರಣದಲ್ಲಿ ಭಾರತದ ಪರ ಅಟಾರ್ನಿಯಾಗಿರುವ ಹರೀಶ್ ಸಾಳ್ವೆ ಹೇಳಿದ್ದಾರೆ.