ಚಾಲೇಂಜರ್ಸ್ ಟ್ರೋಫಿಯ ಆರಂಭಿಕ ಪಂದ್ಯಕ್ಕೆ ಎಸ್. ರವಿ ಅಂಪೈರ್

ಜೂನ್ ಮೊದಲ ದಿನ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿ ಸರಣಿಯ ಮೊದಲ ಪಂದ್ಯಕ್ಕೆ ಭಾರತದ  ಸುಂದರಂ ರವಿ ಅವರು ಅಂಪೈರ್ ಆಗಿ ಮೈದಾನದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ನಿನ್ನೆ ಟೂರ್ನಿಯ ಪಂದ್ಯಗಳ ಅಂಪೈರ್ ಮತ್ತು ಮ್ಯಾಚ್ ರೆಫ್ರಿಗಳ ಹೆಸರನ್ನು ಪ್ರಕಟಿಸಿತು.

ಕ್ರಿಸ್ ಬ್ರಾಡ್, ಡೆವೀಡ್ ಬೂನ್ ಮತ್ತು ಅಂಡಿ ಪೈಕ್ರಾಫ್ಟ್ ಮುಂತಾದ ಐಸಿಸಿ ಮ್ಯಾಚ್ ರೆಫ್ರಿಗಳ ಎಲೈಟ್ ಪ್ಯಾನೆಲ್ ಕೂಡ ಕಾರ್ಯ ನಿರ್ವಹಿಸಲಿದ್ದು 12 ಅಂಪೈರ್ ಗಳು ಟೂರ್ನಿಯನ್ನು ನಡೆಸಿಕೊಡಲಿದ್ದಾರೆ.  ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳ ಅಂಪೈರ್ ಗಳನ್ನು ಅಲ್ಲಿಗೆ ಏರುವ ತಂಡಗಳು ಅಖೈರುಗೊಂಡ ಬಳಿಕ ಪ್ರಕಟಿಸಲಾಗುವುದು.