ತ್ರಿಪಲ್ ತಲಾಖ್ ತೀರ್ಪು ಕಾದಿರಿಸಿದ ಸುಪ್ರೀಂ ಕೋರ್ಟ್

ಪುರುಷ ಪ್ರಧಾನವಾಗಿರುವ, ಕೆಟ್ಟದಾಗಿರುವ ತ್ರಿಪಲ್ ತಲಾಕ್ ನಂಬಿಕೆಯ ಪ್ರಶ್ನೆಯಾಗಿ ಉಳಿಯಲು ಹೇಗೆ ಸಾಧ್ಯ ಎಂದು ಸುಪ್ರೀಂ ಕೋರ್ಟ್ ಮುಸ್ಲಿಂ ಸಂಸ್ಥೆಗಳನ್ನು ಕೇಳಿದೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ  ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಜೆ. ಎಸ್. ಖೆಹರ್ ಅವರ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ತ್ರಿಪಲ್ ತಲಾಖ್ ನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಈ ಪ್ರಶ್ನೆ ಎತ್ತಿದೆ.

ಪ್ರಕರಣದಲ್ಲಿ ನ್ಯಾಯಾಲಯುವು ಕೇಂದ್ರ ಸರ್ಕಾರ, ಅಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್, ಅಲ್ ಇಂಡಿಯಾ ಮುಸ್ಲೀಂ ವುಮೆನ್ ಪರ್ಸನಲ್ ಲಾ ಬೋರ್ಡ್ ಮತ್ತಿತ್ತರರ ವಾದವನ್ನು ಆರು ದಿನ ಆಲಿಸಿ ಇದೀಗ ಅದು ತೀರ್ಪು ಕಾದಿರಿಸಿದೆ.