ದುಬೈಯಲ್ಲಿ ಸ್ಟಾರ್ಟ್ ಅಪ್ ಇಂಡಿಯಾ ಸಮಾವೇಶ

ಸಿಜಿಐ ದುಬೈ ಮತ್ತು ಅಬುದಾಬಿಯಲ್ಲಿನ ಭಾರತದ ರಾಯಭಾರ ಕಚೇರಿಯು ಐಸ್ಪಿರಿಟ್ ಎಂಬ ಲಾಭರಹಿತ ಚಿಂತಕ ಚಾವಡಿ ಮತ್ತು ಟಿಐಇ ಬೆಂಬಲಿತ ಎರಡು ದಿನಗಳ “ಸ್ಟಾರ್ಟ್ ಅಪ್ ಇಂಡಿಯಾ ಶೃಂಗ ಸಭೆ” ಯುಎಇಯಲ್ಲಿ ಮೇ 23 ರಿಂದ 24ರವರೆಗೆ ನಡೆಯಲಿದೆ.

ಯುಎಇಯಲ್ಲಿ ಮೊದಲ ಬಾರಿಗೆ ಇಂತಹ ಸ್ಟಾರ್ಟ್ ಅಪ್ ಸಮ್ಮಿಟ್ ನಡೆಯುತ್ತಿದೆ. ಇದರ ಮುಖ್ಯ ಉದ್ದೇಶ ಯುಎಇ ಮತ್ತು ಇಂಡಿಯಾದಲ್ಲಿ ಸ್ಟಾರ್ಟ್ ಅಪ್ ಗಳಿಗೆ ಪೂರಕ ವಾತಾವರಣ ಕಲ್ಪಿಸುವುದಾಗಿದೆ. ಇಲ್ಲಿ ಸಹೋದ್ಯಮ, ಚಿಂತನೆಗಳ ವಿನಿಮಯ, ಹೂಡಿಕೆದಾರರು, ತಜ್ಞರು ಮತ್ತು ಉದ್ದಿಮೆದಾರರ ಮಧ್ಯೆ ಸಮಾಲೋಚನೆ ನಡೆಯಲಿದೆ.