ಭಾರತದಲ್ಲಿ ಸ್ಮಾರ್ಟ್ ಸಿಟಿ ಅಭಿವೃದ್ಧಿಗೆ ಸ್ವೀಡನ್ ಆಸಕ್ತಿ

ಭಾರತದಲ್ಲಿ ಸ್ಮಾರ್ಟ್ ಸಿಟಿ ಗೆ ರಚನೆಗೆ ಸ್ವೀಡನ್ ಕೂಡ ಆಸಕ್ತಿ ತೋರಿದೆ. ಸ್ಮಾರ್ಟ್ ಸಿಟಿಗಳಲ್ಲಿ ಸಾಮಾನ್ಯ ಕ್ರೀಯಾ ಯೋಜನೆ ರಚಿಸಿ ಹಸಿರು ಸ್ನೇಹಿ ಸಾರ್ವಜನಿಕ ಸಾರಿಗೆ ಮತ್ತು ಘನ ತ್ಯಾಜ್ಯ ನಿರ್ವಹಣೆಯಲ್ಲಿ ತಮ್ಮ ಪರಿಣತಿ ಮತ್ತು ತಂತ್ರಜ್ಞಾನವನ್ನು ನೀಡಲು ಸ್ವೀಡನ್ ಮುಂದೆ ಬಂದಿದೆ.

ಸ್ವೀಡನ್ ನ ಯೂರೋಪಿಯನ್ ಒಕ್ಕೂಟ ವ್ಯವಹಾರ ಮತ್ತು ವ್ಯಾಪಾರ ಸಚಿವ ಅನ್ ಲಿಂಡೆ ಅವರು ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ಅವರನ್ನು ಗುರುವಾರ ಭೇಟಿಯಾಗಿ ಈ ಬಗ್ಗೆ ವಿವರವಾದ ಚರ್ಚೆ ನಡೆಸಿದರು.

ಸ್ವೀಡನ್ ತ್ಯಾಜ್ಯ ನಿರ್ವಹಣೆ, ನಗರ ಸಾರಿಗೆ ವ್ಯವಸ್ಥೆ, ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ, ವಾಯು ಶುದ್ಧೀಕರಣ, ರಿಯಲ್ ಟೈಮ್ ಮಾಹಿತಿ ವ್ಯವಸ್ಥೆ, ಕಮಾಂಡ್ ಮತ್ತು ಕಂಟ್ರೋಲ್ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿದ್ದು ಭಾರತದ ಸ್ಮಾರ್ಟ್ ಸಿಟಿ ಪರಿಕಲ್ಪನೆಯಲ್ಲಿ ಇದಕ್ಕೆ ಪ್ರಮುಖ ಪಾತ್ರವಿದೆ ಎಂದು ಸ್ವೀಡನ್ ನ ಸಚಿವರು ಹೇಳಿದ್ದಾರೆ.