ಭಾರತದ ಸೈನ್ಯ ಸೇರಿದ ಎಂ777 ಎ-2 ಅಲ್ಟ್ರಾ ಲೈಟ್ ಹೌಟ್ಜರ್

ಭಾರತದ ಸೇನೆ ಸೇರಲು ಎಂ777 ಎ-2 ಅಲ್ಟ್ರಾ ಲೈಟ್ ಫಿರಂಗಿಗಳು ಸಿದ್ಧವಾಗಿದ್ದು ತಯಾರಿ ಆರಂಭಗೊಂಡಿದೆ.  ಇವುಗಳ ಪರೀಕ್ಷೆ ನಡೆಯುತ್ತಿದ್ದು ವಿವಿಧ ಮದ್ದುಗುಂಡುಗಳ ಬಳಕೆ ನಡೆಸಲಾಗುತ್ತಿದೆ.

ಸುಮಾರು 30 ವರ್ಷಗಳ ಬಳಿಕ ಭಾರತದ ಶಸ್ತ್ರಾಗಾರವನ್ನು ಹೊಸ ಫಿರಂಗಿಗಳು ತುಂಬುತ್ತಿವೆ. 80ರ ದಶಕದಲ್ಲಿ ಸೇರ್ಪಡೆಯಾದ ಭೊಫೊರ್ಸ್ ಬಳಿಕ ಹೊಸ ಫಿರಂಗಿಗಳು ಭಾರತದ ಸೇನೆಗೆ ಸೇರ್ಪಡೆಯಾಗಿರಲಿಲ್ಲ. 2016ರ ನವೆಂಬರ್ ನಲ್ಲಿ ಈ ಫಿರಂಗಿ ಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.

ಮೊದಲು 2 ಗನ್ ಗಳು ಬಳಿಕ ಸೆಪ್ಟೆಂಬರ್ 2018ರ ಹೊತ್ತಿಗೆ ಮತ್ತೆ ಮೂರು ಗನ್ ಗಳನ್ನು ಕೊಳ್ಳಲಾಗುತ್ತದೆ. ಅಮೆರಿಕದೊಂದಿಗೆ ಭಾರತ ಈ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದು 2019ರ ಮಾರ್ಚ್ ನಿಂದ ಪ್ರತಿ ತಿಂಗಳು 5 ಗನ್ ಗಳು ಭಾರತದ ಬತ್ತಳಿಕೆ ಸೇರಲಿವೆ.