ಮಹಾರಾಷ್ಟ್ರದಲ್ಲಿನ 100 ಕೋಟಿ ರೂ ಮೌಲ್ಯದ ಮಲ್ಯ ಮನೆಯನ್ನು ಮುಟ್ಟುಗೋಲು ಹಾಕಿಕೊಂಡ ಇಡಿ

ನಿನ್ನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಅಲಿಬಗ್ ನಲ್ಲಿ ಸಮುದ್ರ ಕಿನಾರೆಯಲ್ಲಿದ್ದ  ಮದ್ಯ ವ್ಯಾಪಾರಿ ವಿಜಯ ಮಲ್ಯ ಅವರಿಗೆ ಸೇರಿದ 100 ಕೋಟಿ ರೂ ಮೌಲ್ಯದ ಮನೆಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಹಣದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಇಡಿ ಮಲ್ಯ ಅವರ ಮೇಲೆ ತನಿಖೆ ನಡೆಸುತ್ತಿದೆ.

17 ಎಕರೆ ಜಾಗದಲ್ಲಿ ಆಸ್ತಿ ಹಬ್ಬಿದ್ದು ಕಳೆದ ಸೆಪ್ಟೆಂಬರ್ ನಲ್ಲಿ ಈ ಆಸ್ತಿಯನ್ನು ಇಡಿ ಅಟ್ಯಾಚ್ ಮಾಡಿತ್ತು.  ಐಡಿಬಿಐ ಬ್ಯಾಂಕ್ ಗೆ 900 ಕೋಟಿ ರೂ ವಂಚಿಸಿದ ಆರೋಪ ಮಲ್ಯ ಅವರ ಮೇಲಿದೆ.