ಮೇ 23ಕ್ಕೆ ಆಫ್ರಿಕನ್ ಡೆವಲಪ್ ಮೆಂಟ್ ಬ್ಯಾಂಕ್ ನ ವಾರ್ಷಿಕ ಸಮಾವೇಶವನ್ನು ಉದ್ಘಾಟಿಸಲಿರುವ ಪ್ರಧಾನಿ ನರೇಂದ್ರ ಮೋದಿ

ಆಫ್ರಿಕನ್ ಅಭಿವೃದ್ಧಿ ಬ್ಯಾಂಕ್ ನ ವಾರ್ಷಿಕ ಸಮಾವೇಶವು ಮೇ 23ರಂದು ನಡೆಯಲಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಗುಜರಾತ್ ನ ಗಾಂಧಿ ನಗರದಲ್ಲಿ ಮೇ 22 ರಿಂದ 26ರವೆಗೆ ಸಮಾವೇಶ ನಡೆಯಲಿದೆ.

ನವದೆಹಲಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಆರ್ಥಿಕ ವ್ಯವಹಾರ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಅವರು ಮೊತ್ತ ಮೊದಲ ಬಾರಿಗೆ ಅಫ್ರಿಕನ್ ಅಭಿವೃದ್ಧಿ ಬ್ಯಾಂಕ್  ನ ವಾರ್ಷಿಕ ಸಭೆಯನ್ನು ಭಾರತ ಆಯೋಜಿಸುತ್ತಿದೆ ಎಂದು ಹೇಳಿದರು.

ವಿಶ್ವದ 81 ಸದಸ್ಯ ರಾಷ್ಟ್ರಗಳಿಂದ 3,000 ಪ್ರತಿನಿಧಿಗಳು  ಇದರಲ್ಲಿ ಭಾಗವಹಿಸಲಿದ್ದಾರೆ. ಕೃಷಿ, ಇಂಧನ, ಕೈಗಾರೀಕಿಕರಣ, ಪ್ರಾದೇಶಿಕ ಸಂಪರ್ಕ ಮತ್ತು ಜೀವನ ಮಟ್ಟದ ಸುಧಾರಣೆ ಈ ಐದು ಕ್ಷೇತ್ರಗಳಿಗೆ ಒತ್ತು ಕೊಟ್ಟು ಸಮಾವೇಶದಲ್ಲಿ ಚರ್ಚೆ ನಡೆಯಲಿದೆ.