ಮೇ 26ರಂದು ಅಸ್ಸಾಂ ನ ಡೋಲಾ-ಸಡಿಯಾ ಸೇತುವೆಯನ್ನು ದೇಶಕ್ಕೆ ಅರ್ಪಿಸಲಿರುವ ಪ್ರಧಾನ ಮಂತ್ರಿ

ಈ ತಿಂಗಳ 26 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಸ್ಸಾಂಬ ಡೋಲಾ-ಸಾಡಿಯಾ ಸೇತುವೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಮಾಹಿತಿಯನ್ನು ನೀಡಿದ ಅಸ್ಸಾಂನ ಲೋಕಪಯೋಗಿ ಸಚಿವ ಪರಿಮಲ್ ಶುಕ್ಲಾ ಬೈದ್ಯ ಈ ಸೇತುವೆಯ ಉದ್ದ 9.16 ಕಿಮೀ ಇದ್ದು ಇದು ದೇಶದಲ್ಲೆ ಅತ್ಯಂತ ಉದ್ದನೆಯ ಸೇತುವೆ ಎಂದು ಹೇಳಿದರು.

ಅಸ್ಸಾಂ ಮತ್ತು ಅರುಣಾಚಲ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಈ ಸೇತುವೆ ನಿರ್ಮಾಣಕ್ಕೆ 1,200 ಕೋಟಿ ರೂ ವೆಚ್ಚವಾಗಿದೆ.