ಮೇ 28ರಂದು ಮನ್ ಕಿ ಬಾತ್ ಕಾರ್ಯಕ್ರಮ ನಡೆಸಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಕಾಶವಾಣಿಯ ಕೇಳುಗರನ್ನು ಉದ್ದೇಶಿಸಿ ತಮ್ಮ ಮುಂದಿನ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮೇ 28 ರಂದು ಮಾತನಾಡಲಿದ್ದಾರೆ. ಜನರು ತಮ್ಮ ಅಭಿಪ್ರಾಯ, ಯೋಚನೆ, ಸಲಹೆ ಗಳನ್ನು ಮೈ ಗವ್ ಒಪನ್ ಫಾರಂ ನಲ್ಲಿ ಅಥವಾ ಉಚಿತ ಕರೆ ಸಂಖ್ಯೆ 1800-11-7800 ನಲ್ಲಿ ಪ್ರಧಾನಿ ಅವರ ಜೊತೆ ಹಿಂದಿ ಅಥವಾ ಇಂಗ್ಲೀಷ್ ನಲ್ಲಿ ಹಂಚಿಕೊಳ್ಳಬಹುದು.

ಜನರು 1922 ಕ್ಕೆ ಎಸ್ಎಮ್ಎಸ್ ಮೂಲಕ ಅಥವಾ ದೂರವಾಣಿಯ ಮೂಲಕ ಕೂಡ ತಮ್ಮ ಅನಿಸಿಕೆ ವ್ಯಕ್ತಪಡಿಸಬಹುದು. ಅತ್ಯುತ್ತಮ ಮಾಹಿತಿಯನ್ನು ಪ್ರಧಾನಿಗಳು ತಮ್ಮ ಭಾಷಣದಲ್ಲಿ ಬಳಸಿಕೊಳ್ಳಲಿದ್ದಾರೆ. ಕಾರ್ಯಕ್ರಮವು ಆಕಾಶವಾಣಿಯ ಎಲ್ಲ ಜಾಲಗಳು ಮತ್ತು ದೂರದರ್ಶನದಲ್ಲಿ ಪ್ರಸಾರವಾಗಲಿದೆ. ಡಿಡಿ ನ್ಯೂಸ್, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮತ್ತು ಪ್ರಧಾನ ಮಂತ್ರಿ ಕಚೇರಿಯ ವೆಬ್ ಸೈಟ್ ನಲ್ಲಿಯೂ ಕೂಡ ಯೂಟ್ಯೂಬ್ ಚಾನೆಲ್ ಮೂಲಕ ಪ್ರಸಾರವಾಗಲಿದೆ.