ಜುಲೈ 16ಕ್ಕೆ ಸರ್ವ ಪಕ್ಷಗಳ ಸಭೆ ಕರೆ ಸ್ಪೀಕರ್

ಸಂಸತ್ತಿನ ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಸರ್ವ ಪಕ್ಷಗಳ ಸಭೆಯನ್ನು ಜುಲೈ 16ರಂದು ಕರೆದಿದ್ದಾರೆ.

ಲೋಕಸಭೆಯಲ್ಲಿ ಸಹಕಾರ ಹಾಗೂ ಸೌಹಾರ್ದದೊಂದಿಗೆ ಕಲಾಪಗಳನ್ನು ನಡೆಸುವ ಬಗ್ಗೆ ಸ್ಪೀಕರ್ ಅವರು ಎಲ್ಲಾ ಪಕ್ಷಗಳಲ್ಲಿ ವಿನಂತಿಸಿಕೊಳ್ಳಲಿದ್ದಾರೆ.  ಸೋಮವಾರದಿಂದ ಸಂಸತ್ ಅಧಿವೇಶನ ಪ್ರಾರಂಭಗೊಳ್ಳುತ್ತಿದ್ದು, ಮುಂದಿನ ಆಗಸ್ಟ್ ತನಕ ನಡೆಯಲಿದೆ.