ದೇಶದ ಮೊಲದ ಸೌರ ಇಂಧನ ಡೆಮು ರೈಲಿಗೆ ಚಾಲನೆ

ನವದೆಹಲಿಯ ಕಾರ್ಯಕ್ರಮವೊಂದರಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ದೇಶದ ಮೊದಲ ಸೌರ ಇಂಧನ ಪ್ರೇರಿತ ಡೆಮು ರೈಲಿಗೆ ಚಾಲನೆ ನೀಡಿದರು. 1600 ಹಾರ್ಸ್ ವಿದ್ಯುತ್ ರೈಲು ಇದಾಗಿದ್ದು, ರಾತ್ರಿ ವೇಳೆ ಬಳಸಿಕೊಳ್ಳಲು ವಿಶೇಷ ಬ್ಯಾಟರಿ ಬ್ಯಾಂಕ್ ನ್ನು ಕೂಡ ಇದು ಒಳಗೊಂಡಿದೆ.

ದೆಹಲಿಯ ಸರಾಯ್ ರೋಹಿಲಾದಿಂದ ಹರ್ಯಾಣದ ಫರೂಕ್ ನಗರಕ್ಕೆ ಈ ರೈಲು ಸಂಚರಿಸಲಿದೆ. ಈ ಸಂದರ್ಭದಲ್ಲಿ ಮಾತನಾಡಿದ ರೈಲ್ವೆ ಸಚಿವರು, ಭಾರತೀಯ ರೈಲ್ವೆ ಪರಿಸರ ಸ್ನೇಹಿಯಾಗಿ ಮಾರ್ಪಾಡಾಗುತ್ತಿದೆ. ಈ ರೈಲಿನಿಂದಾಗಿ ಸುಮಾರು 21000 ಲೀಟರ್ ಡಿಸೇಲ್ ಉಳಿತಾಯವಾಗಲಿದೆ. ಆ ಮೂಲಕ ವರ್ಷಕ್ಕೆ 12 ಲಕ್ಷ ರೂ ಉಳಿಯಲಿದೆ ಎಂದು ಹೇಳಿದರು.