ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ಮುಂದುವರಿಯಲಿದೆ: ಲೆ.ಜ. ಸಂಧು

ಭಯೋತ್ಪಾದಕರ ವಿರುದ್ಧ ಕಠಿಣ ಧೋರಣೆಯನ್ನು ಮುಂದುವರಿಸಲಿದ್ದೇವೆ ಮತ್ತು ಅಮರನಾಥ ಯಾತ್ರಾರ್ಥಿಗಳ ಮೇಲೆ ದಾಳಿ ಮಾಡಿದ ಉಗ್ರವಾದಿಗಳನ್ನು ಪತ್ತೆ ಹಚ್ಚಲಿದ್ದೇವೆ ಎಂದು ಕಾಶ್ಮೀರದ ಸೇನಾ ಕಮಾಂಡರ್ ಲೆ.ಜ. ಜೆ.ಎಸ್. ಸಂಧು ಹೇಳಿದ್ದಾರೆ.
ಕಣಿವೆಯಲ್ಲಿ ಪರಿಸ್ಥಿತಿ ಸುಧಾರಿಸಲಿದೆ ಎಂಬ ಆಶಾಭಾವ ನನ್ನದು. ಅಮರನಾಥ ಯಾತ್ರಾರ್ಥಿಗಳ ಮೇಲೆ ದಾಳಿ ನಡೆದುದು ನಿಜಕ್ಕೂ ವಿಪರ್ಯಾಸ. ಹಾಗಂತ ಸೇನೆ ಸುಮ್ಮಿನಿರದು. ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಹೇಳಿದರು. 
ಕಾಶ್ಮೀರದ ಸೇನಾ ಸಿಬ್ಬಂದಿ ಜಹೂರ್ ಅಹ್ಮದ್ ಥಾಕೂರ್ ಉಗ್ರವಾದಿಗಳೊಂದಿಗೆ ಸೇರಿಕೊಂಡಿದ್ದಾನೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದೂ ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.