ಅಮೆರಿಕದ ಕಚ್ಚಾತೈಲ ಶೇ. 5ರಷ್ಟು ಏರಿಕೆ

ಬ್ರೆಂಟ್ ಮತ್ತು ಯುಎಸ್‌ ಡಬ್ಲ್ಯೂಟಿಐ ಕಚ್ಚಾತೈಲ ಬೆಲೆಯು ಕಳೆದ ವಾರ ಶೇ. 5ರಷ್ಟು ಏರಿಕೆ ಕಂಡಿದೆ. ಅಂತಾರಾಷ್ಟ್ರೀಯ ಎನರ್ಜಿ ಏಜೆನ್ಸಿಯಿಂದ ಬೇಡಿಕೆ ಹೆಚ್ಚಳ ಮತ್ತು ಚೀನಾದಲ್ಲಿ ಕಚ್ಚಾ ತೈಲ ಆಮದು ಹೆಚ್ಚಳದ ವರದಿಯಿಂದಾಗಿ ಈ ಏರಿಕೆ ಕಂಡಿದೆ. ಇದೇ ವೇಳೆ ಅಮೆರಿಕದಲ್ಲಿ ಕಚ್ಚಾ ತೈಲ ಸಂಗ್ರಹ ಇಳಿಕೆಯಾಗಿದೆ ಎಂಬ ವರದಿಯೂ ಕೇಳಿಬಂದಿದೆ. ಈ ವರ್ಷದ ಮೊದಲ ಆರು ತಿಂಗಳಲ್ಲಿ ಶೇ. 13.8ರಷ್ಟು ತೈಲ ಆಮದು ಹೆಚ್ಚಳವಾಗಿದೆ.