ಉಪರಾಷ್ಟ್ರಪತಿ ಅಭ್ಯರ್ಥಿಯನ್ನು ಘೋಷಿಸಲಿರುವ ಬಿಜೆಪಿ

ಬಿಜೆಪಿ ಇಂದು ತನ್ನ ಉಪರಾಷ್ಟ್ರಪತಿ ಅಬ್ಯರ್ಥಿಯನ್ನು ಘೋಷಣೆ ಮಾಡಲಿದೆ. ಇದಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲು ಪಕ್ಷದ ಸಂಸದೀಯ ಮಂಡಳಿಯು ನವದೆಹಲಿಯಲ್ಲಿ ಇಂದು ಸಭೆ ಸೇರಲಿದೆ. ವಿರೋಧ ಪಕ್ಷ ಈಗಾಗಲೇ ಪಶ್ಚಿಮ ಬಂಗಾಳ ರಾಜ್ಯಪಾಲ ಗೋಪಾಲ ಕೃಷ್ಣ ಗಾಂಧಿಯವರನ್ನು ಈ ಹುದ್ದೆಗೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.

ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆಯ ದಿನವಾಗಿರಲಿದೆ. ಮುಂದಿನ ತಿಂಗಳು 5ನೇ ದಿನಾಂಕದಂದು ಮತದಾನ ನಡೆಯಲಿದ್ದು, ಅದೇ ದಿನ ಮತ ಎಣಿಕೆಯೂ ನಡೆಯಲಿದೆ.