ಕಂದಕಕ್ಕೆ ಬಸ್ ಉರುಳಿ 16 ಅಮರನಾಥ ಯಾತ್ರಿಕರ ಸಾವು; ಸಂತಾಪ ವ್ಯಕ್ತಪಡಿಸಿದ ಮೋದಿ

ಬಸ್‌ ಕಂದಕ್ಕೆ ಉರುಳಿದ್ದರಿಂದಾಗಿ 16 ಅಮರನಾಥ ಯಾತ್ರಿಗಳು ಸಾವನ್ನಪ್ಪಿದ್ದು, ಇತರ 19 ಜನರು ಗಾಯಗೊಂಡಿರುವ ಘಟನೆ ಜಮ್ಮು ಕಾಶ್ಮೀರದಲ್ಲಿ ರಾಂಬನ್‌ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಗಾಯಗೊಂಡವರನ್ನು ವಿಮಾನದ ಮೂಲಕ ಸಾಗಿಸಲಾಗಿದ್ದು ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ.

ಯಾತ್ರಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್‌ ಶ್ರೀನಗರಿಂದ ಅಮರನಾಥ ಗುಹೆಯ ಕಡೆ ತೆರಳುತ್ತಿತ್ತು. ನಚಿಲಾನಾ ಸೇನಾ ನೆಲೆ ಬಳಿ ಟೈರ್ ಸ್ಫೋಟಗೊಂಡಿದ್ದರಿಂದ ಅಪಘಾತ ಉಂಟಾಗಿದೆ. ಘಟನೆಯ ಬಗ್ಗೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಮೋದಿ, ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.