ಖತಾರ್ ಮತ್ತು ಅರಬ್‌ ರಾಷ್ಟ್ರಗಳ ಮಧ್ಯೆ ಅಂತಾರಾಷ್ಟ್ರೀಯ ವೇದಿಕೆ ಮಧ್ಯಪ್ರವೇಶ ಅಗತ್ಯ ಎಂದು ಯುಎಇ ಅಧಿಕಾರಿ

ಖತಾರ್ ಮತ್ತು ಅರಬ್‌ ದೇಶಗಳ ಮಧ್ಯೆ ನಡೆಯುತ್ತಿರುವ ಸಂಘರ್ಷ ನಿರ್ವಹಣೆಗೆ ಅಂತಾರಾಷ್ಟ್ರೀಯ ಮೇಲ್ವಿಚಾರಣೆ ಅಗತ್ಯವಿದೆ ಎಂದು ಯುನೈಟೆಡ್‌ ಅರಬ್ ಎಮಿರೇಟ್ಸ್‌ನ ಹಿರಿಯ ಅಧಿಕಾರಿ ಹೇಳಿದ್ದಾರೆ. ದೋಹಾ ಮೂಲಕ ಒತ್ತಡ ಹೇರುವಿಕೆ ತಂತ್ರ ಯಶಸ್ವಿಯಾಗಿದೆ ಎಂದೂ ಅವರು ಹೇಳಿದ್ದಾರೆ.

ಕಳೆದ ತಿಂಗಳು ಯುನೈಟೆಡ್‌ ಅರಬ್ ಎಮಿರೇಟ್ಸ್‌, ಬಹ್ರೇನ್‌ ಮತ್ತು ಈಜಿಪ್ಟ್‌ ದೇಶಗಳು ಖತಾರ್ ವಿರುದ್ಧ ನಿರ್ಬಂಧ ಹೇರಿದ್ದವು. ಗಲ್ಫ್‌ ದೇಶದ ವಿರುದ್ಧ ರಾಯಭಾರ ಸಂಬಂಧವನ್ನು ಈ ದೇಶಗಳು ಕಡಿದುಕೊಂಡಿದ್ದವು.