ಜಾಧವ್ ವಿರುದ್ಧದ ಸಾಕ್ಷಿಗಳ ವಿಶ್ಲೇಷಣೆ ನಡೆಸಿದ ಪಾಕ್ ಸೇನಾ ಮುಖ್ಯಸ್ಥ

ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆ ಎದುರಿಸುತ್ತಿರುವ ಕುಲಭೂಷಣ್‌ ಜಾಧವ್‌ ವಿರುದ್ಧದ ಸಾಕ್ಷಿಗಳನ್ನು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾ ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ನಿನ್ನೆ ಇಸ್ಲಾಮಾಬಾದ್‌ನಲ್ಲಿ ಸೇನಾ ಮೂಲಗಳು ತಿಳಿಸಿದ್ದು, ಕಳೆದ ತಿಂಗಳೇ ಬಾಜ್ವಾಗೆ ಕ್ಷಮಾದಾನ ಅರ್ಜಿಯನ್ನು ಜಾಧವ್‌ ಸಲ್ಲಿಸಿದ್ದರು.

ಬೇಹುಗಾರಿಕೆ ಮತ್ತು ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಕಳೆದ ಏಪ್ರಿಲ್‌ನಲ್ಲಿ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯವು ಜಾಧವ್‌ಗೆ ಗಲ್ಲು ಶಿಕ್ಷೆ ವಿಧಿಸಿತ್ತು.