ಧಾನ್ಯ ಮತ್ತು ಎಣ್ಣೆಬೀಜದಲ್ಲಿ ಭಾರತ ಸ್ವಾವಲಂಬನೆ ಶೀಘ್ರ: ಕೃಷಿ ಸಚಿವ

ಭಾರತ ಧಾನ್ಯಗಳು ಮತ್ತು ಎಣ್ಣೆ ಬೀಜ ಉತ್ಪಾದನೆಯಲ್ಲಿ ಮುಂದಿನ ವರ್ಷಗಳಲ್ಲಿ ಸ್ವಾವಲಂಬನೆ ಸಾಧಿಸಲಿದೆ ಎಂದು ಕೃಷಿ ಸಚಿವ ರಾಧಾ ಮೋಹನ ಸಿಂಗ್‌ ಹೇಳಿದ್ದಾರೆ.  ಉತ್ತಮ ಗುಣಮಟ್ಟದ ಬೀಜ ಮತ್ತು ತಂತ್ರಜ್ಞಾನಗಳನ್ನು ಬಳಸಿ ಬೆಳೆ ಹೆಚ್ಚಳ ಮಾಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.

ದೇಶ ಈಗ 5 ಮಿಲಿಯನ್‌ ಟನ್‌ ಧಾನ್ಯಗಳು ಮತ್ತು 14.5 ಮಿಲಿಯನ್ ಟನ್‌ ಎಣ್ಣೆಬೀಜಗಳನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು ಭಾನುವಾರ ನವದೆಹಲಿಯಲ್ಲಿ ಕೃಷಿ ಸಂಶೋಧನೆಯ ಭಾರತೀಯ ಕೌನ್ಸಿಲ್‌ನ 89ನೇ ದಿನಾಚರಣೆ ವೇಳೆ ಹೇಳಿದ್ದಾರೆ.