ನಾಪತ್ತೆಯಾದ ಭಾರತೀಯರು ಇರಾಕ್‌ನ ಬದುಷ್‌ ಜೈಲಿನಲ್ಲಿ: ಸುಷ್ಮಾ ಸ್ವರಾಜ್

ಇರಾಕ್‌ನಲ್ಲಿ 2014ರಿಂದಲೂ ನಾಪತ್ತೆಯಾಗಿರುವ 39 ಭಾರತೀಯರ ಕುಟುಂಬ ಸದಸ್ಯರನ್ನು ಭಾನುವಾರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ  ಸಚಿವ ಎಂ.ಜೆ.ಅಕ್ಬರ್‌ ಹಾಗೂ ವಿಕೆ ಸಿಂಗ್‌ ಭೇಟಿ ಮಾಡಿದ್ದಾರೆ. ಇರಾಕ್‌ನ ಮೂಲಗಳ ಪ್ರಕಾರ ನಾಪತ್ತೆಯಾಗಿರುವ ಭಾರತೀಯರು ಬದುಷ್‌ ಜೈಲಿನಲ್ಲಿ ಇರಬಹುದು ಎನ್ನಲಾಗಿದೆ. ಈ ಪ್ರದೇಶದಲ್ಲಿ ಐಸಿಸ್‌ ಉಗ್ರರ ವಿರುದ್ಧದ ಹೋರಾಟ ಇನ್ನೂ ನಡೆಯುತ್ತಿದೆ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಇರಾಕ್‌ಗೆ ತೆರಳಿ ನಾಪತ್ತೆಯಾದ ಭಾರತೀಯರ ವಿವರವನ್ನು ವಿ.ಕೆ.ಸಿಂಗ್ ಪಡೆದಿದ್ದಾರೆ. ಇರಾಕ್ ಸರ್ಕಾರವು ಮೊಸುಲ್‌ ಅನ್ನು ಐಸಿಸ್‌ ಹಿಡಿತದಿಂದ ತಪ್ಪಿಸಿದ ದಿನವೇ ಇರಾಕ್‌ ಪ್ರಧಾನಿ ಬಳಿ ನಾಪತ್ತೆಯಾಗಿರುವ ಭಾರತೀಯರ ವಿಚಾರವನ್ನು ಮಾತನಾಡಿದ್ದೇನೆ ಎಂದು ಸ್ವರಾಜ್ ಹೇಳಿದ್ದಾರೆ.