ಭಾರಿ ಮಳೆ ಮತ್ತು ಪ್ರವಾಹದಿಂದ ಗುಜರಾತ್‌ನಲ್ಲಿ 15 ಸಾವು

ಗುಜರಾತ್‌ನಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ. ಜಾಮನಗರ ಜಿಲ್ಲೆಯಲ್ಲಿ ಎನ್‌ಡಿಎಆರ್‌ಎಫ್ ತಂಡುವ 20ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದು, ಕಳೆದ ಮೂರು ದಿನಗಳಲ್ಲಿ ರಕ್ಷಿಸಿದವರ ಸಂಖ್ಯೆ 405 ಆಗಿದೆ. ತುರ್ತು ಪರಿಸ್ಥಿತಿಯಲ್ಲಿ ನೆರವಿಗಾಗಿ ಐದು ಎನ್‌ಡಿಆರ್‌ಎಫ್‌ ತಂಡ ಸನ್ನದ್ಧವಾಗಿದೆ.

ಪ್ರವಾಹ ಪೀಡಿತ ಪ್ರದೇಶಗಳಿಗೆ ಆಹಾರ, ಕುಡಿಯುವ ನೀರು ಮತ್ತು ಔಷಧಗಳನ್ನು ವಿತರಿಸಲಾಗುತ್ತಿದೆ. ಸೌರಾಷ್ಟ್ರ ಭಾಗದಲ್ಲಿನ ನದಿಗಳು ಉಕ್ಕಿ ಹರಿಯುತ್ತಿವೆ. ಕಳೆದ 24 ಗಂಟೆಗಳಲ್ಲಿ ಕಚ್ ಜಿಲ್ಲೆಯ ಕೆಲವು ಭಾಗಗಳಲ್ಲೂ ವಿಪರೀತ ಮಳೆಯಾಗಿದೆ.