ವಿಕ್ಟೋರಿಯನ್‌ ಓಪನ್ ಸ್ಕ್ವಾಷ್‌ನಲ್ಲಿ ಹರಿಂದರ್ ಪಾಲ್ ಸಂಧು ಗೆಲುವು

ವಿಕ್ಟೋರಿಯನ್ ಓಪನ್‌ ಸ್ಕ್ವಾಷ್‌ ಟೂರ್ನಮೆಂಟ್‌ನಲ್ಲಿ ಭಾರತದ ಹರಿಂದರ್ ಪಾಲ್ ಸಂಧು ಗೆಲುವು ಸಾಧಿಸಿದ್ದು, ಆಸ್ಟ್ರೇಲಿಯಾದ ರೆಕ್ಸ್‌ ಹೆಡ್ರಿಕ್‌ರನ್ನು 12-14, 11-3, 11-4, 11-7 ಗೋಲುಗಳಿಂದ 77 ನಿಮಿಷದಲ್ಲಿ ಸೋಲಿಸಿದ್ದಾರೆ.

ಮೊದಲ ಪಂದ್ಯ ಅತ್ಯಂತ ರೋಚಕವಾಗಿದ್ದು, ಹೆಡ್ರಿಕ್‌ ಹೆಚ್ಚುವರಿ ಪಾಯಿಂಟ್‌ಗಳನ್ನು ಗಳಿಸಲು ಸಮರ್ಥವಾಗಿದ್ದರು. ಮೂರನೆಯ ಪಂದ್ಯದಲ್ಲಿ ಎರಡನೇ ಆಟವನ್ನು ಗೆಲ್ಲಲು ಸಂಧುಗೆ ಸಾಧ್ವಯಾಗಿದ್ದು, 11-3 ಗೋಲುಗಳಿಂದ ಜಯ ಸಾಧಿಸಿದ್ದಾರೆ. ಮೂರನೆಯ ಪಂದ್ಯದಲ್ಲೂ ಸಂಧು 11-4 ಗೋಲುಗಳಿಂದ ಜಯ ಸಾಧಿಸಿದ್ದಾರೆ.