ಶಂಕಿತ ಅಲ್‌ಖೈದಾ ಉಗ್ರರ ದಾಳಿಯಲ್ಲಿ ಐವರು ಯೆಮೆನ್ ಯೋಧರು ಸಾವು

ಯೆಮೆನ್‌ನಲ್ಲಿ ಶಂಕಿತ ಅಲ್‌ಖೈದಾ ಉಗ್ರರು ನಡೆಸಿದ ದಾಳಿಯಲ್ಲಿ ಐದು ಯೆಮೆನ್ ಯೋಧರು ಸಾವನ್ನಪ್ಪಿದ್ದು ಮೂವರರಿಗೆ ಗಾಯವಾಗಿದೆ. ಈಶಾನ್ಯ ಶಬ್ವಾ ಪ್ರಾಂತ್ಯದಲ್ಲಿ ದಾಳಿ ನಡೆಸಿದ ಸಶಸ್ತ್ರಧಾರಿಯು ಪರಾರಿಯಾಗಿದ್ದಾನೆ. ಈ ಪ್ರದೇಶದಲ್ಲಿ ಅಲ್‌ ಖೈದಾ ಉಗ್ರರ ಬಾಹುಳ್ಯವಿದೆ.

ಅಮೆರಿಕ ಸರ್ಕಾರವು ಯೆಮೆನ್‌ನ ಅಲ್‌ಖೈದಾ ಇನ್‌ ದಿ ಅರೇಬಿಯನ್‌ ಪೆನಿನ್ಸುಲಾ (ಎಕ್ಯೂಎಪಿ) ಸಂಘಟನೆಯನ್ನು ಅತ್ಯಂತ ಅಪಾಯಕಾರಿ ಸಂಘಟನೆ ಎಂದು ಹೆಸರಿಸಿದ್ದು, ಯೆಮೆನ್ ಸರ್ಕಾರದ ವಿರುದ್ಧ ನಿರಂತರವಾಗಿ ಸಂಘರ್ಷ ನಡೆಸುತ್ತಿದೆ. ಕಳೆದ ತಿಂಗಳು ಅಮೆರಿಕ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ಎಕ್ಯೂಎಪಿ ಮುಖ್ಯಸ್ಥ ಅಬು ಖಟ್ಟಾಬ್ ಅಲ್ ಅವ್ಲಬಿ ಸಾವನ್ನಪ್ಪಿದ್ದ.