ಸಂಸತ್‌ ಅಧಿವೇಶನ ಯಶಸ್ವಿಯಾಗುವ ನಿರೀಕ್ಷೆ ವ್ಯಕ್ತಪಡಿಸಿದ ಲೋಕಸಭೆ ಸ್ಪೀಕರ್‌

ಇಂದಿನಿಂದ ಆರಂಭವಾದ ಸಂಸತ್ ಮಳೆಗಾಲದ ಅಧಿವೇಶನ ಯಶಸ್ವಿಯಾಗಲಿದೆ ಎಂಬ ಭರವಸೆಯನ್ನು ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ವ್ಯಕ್ತಪಡಿಸಿದ್ದಾರೆ. ದೇಶವನ್ನು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚಿಸಲು ಎಲ್ಲ ಪಕ್ಷಗಳ ಸಹಮತ ವ್ಯಕ್ತಪಡಿಸಿವೆ.

ಅಧಿವೇಶನಕ್ಕೂ ಮುನ್ನಾದಿನ ಸರ್ವಪಕ್ಷ ಸಭೆ ನಡೆಸಿದ ಸುಮಿತ್ರಾ ಮಹಾಜನ್‌, ಯಾವುದೇ ಅಡೆತಡೆಯಿಲ್ಲದೇ ಅಧಿವೇಶನ ಮುಂದುವರಿಯಲಿದೆ ಎಂದಿದ್ದಾರೆ. ಕೃಷಿಕರ ಆತ್ಮಹತ್ಯೆ ಮತ್ತು ಭದ್ರತಾ ಸನ್ನಿವೇಶಗಳ ಬಗ್ಗೆ ಚರ್ಚಿಸಲು ಎಲ್ಲ ಪಕ್ಷಗಳೂ ಆಸಕ್ತಿ ಹೊಂದಿವೆ ಎಂದು ಅವರು ಹೇಳಿದ್ದಾರೆ.